ಎಬಿಡಿ ದಾಖಲೆ ಮುರಿದು, ತ್ವರಿತಗತಿಯಲ್ಲಿ 9 ಸಾವಿರ ರನ್ ಗಳಿಸಿದ ಕೊಹ್ಲಿ | Oneindia Kannada

2017-10-29 222

ಕಾನ್ಪರದ ಗ್ರೀನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ದಾಖಲೆ ಬರೆದಿದ್ದಾರೆ. ತ್ವರಿತಗತಿಯಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 9,000ರನ್ ಗಳಿಸಿರುವ ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ದಾಖಲೆ ಮುರಿದಿದ್ದಾರೆ. 194 ಇನ್ನಿಂಗ್ಸ್ ನಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಎಬಿ ಡಿ ವಿಲಿಯರ್ಸ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ. 2017ರಲ್ಲಿ 2000ರನ್ ಗಳಿಸಿದ್ದು, ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2012, 2014 ಹಾಗೂ 2016ರಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದರು. ಅಲ್ದೇ 28 ವರ್ಷ ವಯಸ್ಸಿನ ಕೊಹ್ಲಿ ಅವರು ವೃತ್ತಿ ಬದುಕಿನ 32ನೇ ಶತಕ ಸಿಡಿಸಿದ್ದಾರೆ. ಹಾಲಿ ಕ್ರಿಕೆಟರ್ ಗಳ ಪೈಕಿ ಕೊಹ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಸಚಿನ್ ಅವರು 49 ಶತಕ ಸಿಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಏಕದಿನ ಕ್ರಿಕೆಟ್ ನಲ್ಲಿ 97 ಸಿಕ್ಸರ್ ಸಿಡಿಸಿರುವ ಕೊಹ್ಲಿ ಅವರು ಈ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದರೆ 100 ಸಿಕ್ಸರ್ ಗಡಿ ದಾಟಿದ ಭಾರತದ 8ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
Team India captain Virat Kohli on Sunday became the fastest to reach 9000 ODI runs, taking just 194 innings, thanks to a fantastic innings against New Zealand in the third ODI here.

Free Traffic Exchange

Videos similaires